ಮನಸ್ಸು ಹಲವಾರು ಭಾವನೆಗಳ ಸಂತೆ.. ಲಾಗ ಲಗಾಮಿಲ್ಲದ ಇ ಭಾವನೆಗಳಿಗೆ ಬೇಲಿಯೇ ಇಲ್ಲವೇನೋ... ನನ್ನ ಮನ ಕೂಡ ಇದಕ್ಕೆ
ಹೊರತಾಗಿಲ್ಲ.. ಇಲ್ಲಿ ಅದೆಸ್ಟೋ ಬಾರಿ ಕಡಲ ಅಲೆಗಳು ಉಕ್ಕೆರಿದಂತೆ ಭಾವಗಳು ಮೂಡುತ್ತೆ... ಸುನಾಮಿ ಅಲೆಗಳನ್ನು ಎಬ್ಬಿಸಿ ಮರೆಯಾಗಿ ಬಿಡುತ್ತೆ.... ಕೊನೆಗೆ ಏನು ನಡೆದಿಲ್ಲವೇನೋ ಅನ್ನುವಂತೆ ಶಾಂತ ರೂಪ ತಾಳುತ್ತೆ..
ಕಲ್ಪನೆ, ಕನಸು, ಹುಡುಕಾಟ, ಅಲೆದಾಟ ಇವೆಲ್ಲ ಭಾವನೆಗಳ ಮೇಳ .. ಕಲ್ಪನೆಯಲ್ಲಿ ಮೂಡಿರೋದೆಲ್ಲ ನಿಜರೂಪ ತಾಳಬೇಕೆನ್ನೋ ರೂಲ್ಸ್ ಏನು ಇಲ್ವಲ್ಲ .. ನಾನು ಅಸ್ಟೆ ಕನಸು ಕಾಣ್ತೀನಿ .. ಕನಸು ಕಂಡ ಸುಖ ನನ್ನ ಮನದಲ್ಲಿರುತ್ತೆ.. ಹುದುಕಾಟ ಬದುಕಿನ ಉಳಿದ ಅಸ್ಟು ಆಯಸ್ಸನ್ನು ಬೋರ್ ಆಗದಂತೆ ಕೊಂಡೊಯ್ಯೋ ಆಯಾಮ... ನಾನು ಬದುಕಿನ ಹುಡುಕಾಟದಲಿ ಅದೆಸ್ತೋ ಬಾರಿ ಮುಗ್ಗರಿಸಿದ್ದೇನೆ.. ಎಡವಿ ಬಿದ್ದಿದೇನೆ.. ಹಾಗೆ ಏನು ಆಗದಂತೆ ಕೊಡವಿಕೊಂಡು ಮೇಲಕ್ಕೆ ಎದ್ದಿದೀನಿ.. ಇದು ನಿರಂತರ ಪ್ರಕ್ರಿಯೆ ಕೂಡ ಹೌದು... ಹೀಗೆ ಭಾವನೆಗಳ ಬೆನ್ನೇರಿ ನನ್ನ ಬದುಕು ಸಾಗ್ತಾ ಇದೆ.. ಸಾಗ್ತಾ ಸಾಗ್ತಾ ನೆನಪಿನ ಪಳೆಯುಳಿಕೆಯನ್ನು ಜೊತೆ ಜೊತೆಯಲಿ ಕೊಂಡೊಯ್ಯುತಿದ್ದಿನಿ.. ನನಗೆ ತುಂಬ ಖುಷಿ ಕೊಡೋದು ಕಾಯುವಿಕೆ.. ಇದು ಕೆಲವೊಮ್ಮೆ ಖುಷಿ ನೀಡಿದರೆ ಮತ್ತೆ ಕೆಲವೊಮ್ಮೆ ಇಲ್ಲದ ನೋವಿಗೆ ಎಡೆ ಮಾಡಿಕೊಡುತ್ತೆ.. ಆದರೂ ಕಾಯುವಿಕೆ ಎಲ್ಲೋ ಒಂದು ಕಡೆ ಆಶಾವಾದದ ಚೇತನವನ್ನು ತುಂಬುತ್ತೆ...
ಕಾಯುವಿಕೆಯಲಿ ಖುಷಿಯಿದೆ
ಇಂದು ಬಾರದವ ನಾಳೆ ಬಂದಾನು
ಇಂದು ಕನಸಲಿ ನಿಲ್ಲದವ ನಾಳೆ ನಿಂತಾನು
ಇಂದು ಮುಳುಗಿದ ಸೂರ್ಯ ನಾಳೆ ಉದಯಿಸಿದಾಗ
ಇಂದಿನ ಕನಸೆಲ್ಲ ನನಸಾಗಬಹುದೆಂಬ ಆಶಾವಾದದಲಿ ಹಿತವಿದೆ...
No comments:
Post a Comment