Thursday, May 24, 2018

ಅಲೋಚನೆ ಮೇಲೆ ಹಿಡಿತವಿರಲಿ

         
          ಪ್ರತಿ ಮನುಷ್ಯನ ಮನಸ್ಸಿನಲ್ಲಿ ದಿನನಿತ್ಯ 50,000ದಿಂದ 70,000ಸಾವಿರದಷ್ಟು ಯೋಚನೆಗಳು ಹುಟ್ಟುತ್ತವೆ. ಇದರಲ್ಲಿ ಸಕರಾತ್ಮಕ ಹಾಗೂ ನಕರಾತ್ಮಕ ಅಲೋಚನೆಗಳು ಸೇರಿವೆ. ಒಂದೆರಡು ಆಲೋಚನೆಗಳನ್ನು ನಿಯಂತ್ರಿಸಲು ಕಷ್ಟಪಡುವವರು ಇಷ್ಟೊೊಂದು ಯೋಚನೆಗಳನ್ನು ಹಿಡಿತದಲ್ಲಿಡಲು ಸಾಧ್ಯವೇ? ಎಂತಹ ಗಟ್ಟಿ ಮನಸ್ಸುಳ್ಳವರಿಗೂ ಇದು ಅಸಾಧ್ಯ. ಹಾಗಂತ ಇದರ ಬಗ್ಗೆೆ ತಪ್ಪಿತಸ್ಥ ಭಾವನೆಯನ್ನು ಹೊಂದುವ ಅವಶ್ಯಕತೆಯೂ ಇಲ್ಲ. ಇದು ನೈಸರ್ಗಿಕ. ನಕಾರಾತ್ಮಕ ಆಲೋಚನೆಗಳಿಂದ ಕೆಲವೊಮ್ಮೆ ಕಿರಿಕಿರಿ, ಕಸಿವಿಸಿ ಉಂಟಾಗಬಹುದು. ಪೂರ್ತಿ ದಿನವನ್ನೇ ಹಾಳುಗೆಡಹುವ ಇವುಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವೆನಿಸುತ್ತದೆ.

     ಇದಕ್ಕೇನು ಮಾಡಬೇಕು?

ಮೊದಲಿಗೆ ಯಾವ ಅಲೋಚನೆ ಬಗ್ಗೆೆ ಗಮನವನ್ನಿಡಬೇಕೆಂದು ಮೊದಲು ತೀರ್ಮಾನಿಸಿ. 1; ಸ್ನೇಹಿತೆ ತನ್ನ ಮಾತಿನಿಂದ ಮನಸ್ಸಿಗೆ ಕಿರಿಕಿರಿ ಮಾಡುತ್ತಿದ್ದಾಳೆ. 2; ಸ್ನೇಹಿತೆ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಳು. ಮೊದಲ ಯೋಚನೆಯನ್ನು ಬಿಟ್ಟು, ಎರಡನೆಯದರ ಕಡೆಗೆೆ ಗಮನ ನೀಡಬೇಕು. ಯಾರಾದರೂ ಕಿರಿಕಿರಿ ಮಾಡುತ್ತಿದ್ದರೆ ಅಥವಾ ಮನಸ್ಸಿನಲ್ಲಿ ನಕರಾತ್ಮಕ ಆಲೋಚನೆಗಳನ್ನು ಹುಟ್ಟುಹಾಕಿದ್ದರೆ ಇದನ್ನು ಸಕರಾತ್ಮಕವಾಗಿ ಬದಲಾಯಿಸಬೇಕು. ಮನಸ್ಸನ್ನು ಸದಾ ಸಕರಾತ್ಮಕತೆಯ ಕಡೆಗೇ ಕೇಂದ್ರೀಕರಿಸಬೇಕು. ಆಗ ಎಷ್ಟೇ ಕೆಟ್ಟ ಆಲೋಚನೆಗಳು ಉಂಟಾದರೂ ಕೊನೆಗೆ ಅದು ಸಕರಾತ್ಮಕವಾಗಿ ಬದಲಾಗಿಯೇ ಬಿಡುತ್ತದೆ.  ಒಮ್ಮೆೆ  ಮನಸ್ಸಿಿನಲ್ಲಿ ಉದ್ಭವವಾದ ಅನಾವಶ್ಯಕ ಯೋಚನೆಯನ್ನು ತೊರೆದಾಗ ಮನಸ್ಸು ಮತ್ತೆೆ ಸದೃಢವಾಗತೊಡಗುತ್ತದೆ. ಒಂದರ ಹಿಂದೆ ಒಂದರಂತೆ ಉತ್ತಮ ಯೋಚನೆಗಳೇ ಮೂಡತೊಡಗುತ್ತದೆ. ಅಯಸ್ಕಾಾಂತದಂತೆ ನಮ್ಮೊೊಳಗೆ ಶಕ್ತಿಯ ಪ್ರವಾಹವನ್ನೇ ಹರಿಸಲಾರಂಬಿಸುತ್ತದೆ.
                 

ನೋಡುವ ದೃಷ್ಟಿ ಬದಲಾಗಬೇಕು

     ಉತ್ತಮ ಆಲೋಚನೆಗಳನ್ನು ಜೋಡಿಸುವ ಕಾರ್ಯ ಹೊರಗಿನಿಂದ ಆಗುವುದಲ್ಲ. ಅದು ನಮ್ಮಿಿದಲೇ ಆಗಬೇಕಾಗಿದೆ. ಆ ಶಕ್ತಿಿ ಕೂಡ ನಮ್ಮಲ್ಲೇ ಅಡಗಿದೆ. ಒಮ್ಮೆೆ ಪ್ರಯತ್ನಪಟ್ಟಾಾಗ ನಂತರ ಎಲ್ಲವೂ ತನ್ನಿಿಂತಾನೇ ಬದಲಾಗುತ್ತಲೇ ಹೋಗುತ್ತದೆ. ನಮ್ಮೊೊಳಗೆ ನಾವು ಬದಲಾದಾಗ, ಇಡೀ ಜಗತ್ತಿಿನಲ್ಲಿರುವ ಉತ್ತಮ ಅಂಶಗಳೇ ಕಣ್ಣಿಗೆ ಬೀಳತೊಡಗುತ್ತದೆ. ಸುತ್ತಮುತ್ತ ಒಳ್ಳೆಯ ವಿಚಾರಗಳೇ ತುಂಬುತ್ತವೆ. ಅಚಾನಕ್ಕಾಾಗಿ ಒಳ್ಳೆೆಯದೇನೋ ಘಟಿಸಲಿದೆ. ಬದುಕು ಅತ್ಯಾಾಕರ್ಷಕ ಹಾಗೂ ಸರಳವಾಗಿದೆ. ಇವೆಲ್ಲವನ್ನೂ ಮನಸ್ಸಿಿನಲ್ಲಿ ಸ್ಥಾಾಪಿಸಿಕೊಂಡಾಗ, ಪದೇ ಪದೇ ಚಿತ್ರೀಕರಿಸಿಕೊಂಡಾಗ ಅಲೋಚನೆಯ ಧಾಟಿ ಬದಲಾಗುತ್ತದೆ.  ಈ ಸಕರಾತ್ಮಕತೆಯೇ ಬದುಕನ್ನು ಸರಿಯಾದ ದಿಕ್ಕಿಿನೆಡೆಗೆ ಕೊಂಡೊಯ್ಯುತ್ತದೆ. 

Friday, May 3, 2013

ಕನಸು ಕಾಣೋ ರಾಜಕುಮಾರಿ ...

ಆಕೆ ಸದಾ ಕನಸು ಕಾಣೋ ರಾಜಕುಮಾರಿ.. ಕನಸೇ ಬದುಕು.. ಕನಸೇ ಉಸಿರು.. ಹಿಂದಿಲ್ಲ..ಮುಂದಿಲ್ಲ...ಕನಸು ಸಾಗಳು ದಾರಿ ಬೇಕಿಲ್ಲ..
ಅದೇ ಗುಲ್ಮೊಹರ್ ಮರಗಳ ಸಾಲು.. ಚಟಪಟನೆ ಬೀಳೋ ಮಳೆಹನಿಗಳ ಇನಿದನಿ.. ದೂರದಿಂದೆಲ್ಲೋ ಕೇಳಿ ಬರುತ್ತಿರೋ ಕೋಗಿಲೆಯ ಇಂಚರ..
ಜುಳು ಜುಳು ಹರಿಯುತ್ತಿರೋ ನೀರಿನ ತಾಳ ತಪ್ಪದ ಹಿಮ್ಮೇಳ.. ಇವಿಷ್ಟೇ ಸಾಕು ಈಕೆ ಕನಸು ಕಟ್ಟಲು.. ಬದುಕು ಸಾಗಿಸಲು,,,

ಬೆಟ್ಟದ ಮೇಲೊಂದು ಪುಟ್ಟ ಕುಟೀರ .. ಸುತ್ತಮುತ್ತ ಹಬ್ಬಿದ ಮರಗಳ ಸಾಲು.. ಆಗೊಮ್ಮೆ ಈಗೊಮ್ಮೆ ನೆಲವನ್ನು ಸೇರುತ್ತಿರೋ ತರಗೆಲೆಗಳ ಚರಪರ ಸದ್ದು.. ಸುಯ್ಯೆಂದು ಬೀಸುತ್ತಿರೋ ತಣ್ಣನೆಯ ಗಾಳಿ.. ಅಲ್ಲೊಬ್ಬ ಹೈದ.. ಈಕೆಯ ಹೃದಯದಲ್ಲಿ ಪ್ರೀತಿಯ ಬೀಜವನ್ನು ಬಿತ್ತಲು.. ಮನದಲ್ಲಿ ಪ್ರೇಮದ ಕಾರಂಜಿಯನ್ನು ಹರಿಸಲು.. ನೊಂದಾಗ ಮುದ್ದಾಡಿ ರಮಿಸಲು.. ನಿದ್ದೆ ಬಂದಾಗ ಜೋಗುಳ ಹಾಡಲು.. ತಟ್ಟಿ ಮಲಗಿಸಲು.. ಬೆಳದಿಂಗಳ ತಂಪಾದ ರಾತ್ರಿಯಲ್ಲಿ ಕನಸನ್ನು ಜೊತೆ ಜೊತೆಯಾಗಿ ನೇಯಲು..
ಈಕೆಯ ದೃಷ್ಟಿಯಲ್ಲಿ ಕನಸು ಮಾರೋ ಸೊತ್ತಲ್ಲ.. ಕೊಂಡುಕೊಳ್ಳಲು ಯಾರೂ ಬೇಕಿಲ್ಲ.. ಹಂಚಿಕೊಳ್ಳಲು ಜೊತೆಗಾರನಿದ್ದರಷ್ಟೆ ಸಾಕು..
ಗೊತ್ತು ಈಕೆಗಿದು ಕಾಂಕ್ರೀಟು ಕೊಂಪೆಯ ನಡುವೆ ಬತ್ತಿ ಹೋದ ಕನಸು, ಮುರಿದ ಮನಸುಗಳ ನಡುವೆ ಇವೆಲ್ಲ ಅಸಾದ್ಯವೇನೋ ಅನ್ನೋ ಸತ್ಯ.. ಮತ್ತೆ ದೂರದೆಲ್ಲೆಲ್ಲೋ ಕುದುರೆಯೇರಿ ಬರುತ್ತಿರೋ ಕನಸಿನ ರಾಜಕುಮಾರ .. ಟಕ್ ಟಕ್ ಸದ್ದು.... ಮತ್ತೆ ಜೀವತಳೆಯುವಂತೆ ಮಾಡುತ್ತಿದೆ.. ಬತ್ತಿದ ಒರತೆಯಲ್ಲಿ ನೀರ ಚಿಮ್ಮಿಸುತಿದೆ..

Tuesday, February 16, 2010

ನೆನಪುಗಳ ಮಾತು ಮಧುರ...

ಬದುಕಿಗೊಂದು ಗೊತ್ತು ಗುರಿಯಿರದೆ ಸಾದನೆಯ ತುತ್ತತುದಿಗೆರಿದಾಗ ಹಿಂದೊಮ್ಮೆ ತಿರುಗಿ ನೋಡಿ ಅಲ್ಲಿದೆ ನೆನಪಿನ ಸಾಮ್ರಾಜ್ಯ.. ನೆನಪಿನ  ಸಾಮ್ರಾಜ್ಯದಲ್ಲಿ ಎಲ್ಲ ಅಸ್ಪಸ್ಟ.. ಕಂಡರೂ ಕಾಣದಂತೆ ಉಳಿದಿರೋ ಕಡಲ ತೀರ...
ಇಂದಿನ ನೋವ ಮರೆಯೋ ಸಂಜೀವಿನಿಯೇ ಹಿಂದಿನ ನೆನಪು.. ಆ ದಿನ ಕಳೆದ ಸುಂದರ ಕ್ಷಣಗಳು.. ಸ್ನೇಹಿತರ ಜತೆಗಿನ ಒಡನಾಟ.. ಸಾಮಿಪ್ಯ.. ಬದುಕಿನ ಜಂಜಾಟದಲ್ಲಿ ನಮ್ಮನ್ನೇ ನಾವು ಮರೆತಿರುವಾಗ ಎಚ್ಚರಿಸುತ್ತದೆ.. ಉಲ್ಲಾಸದ ಕಾರಂಜಿಯನ್ನು ಹರಿಸುತ್ತದೆ..
ನೆನಪು ಎಂತವನಿಗು ಆಹ್ಲಾದದಾಯಕ.. ದುಗುಡ ತುಂಬಿದ ಮನಕ್ಕೆ ಸಾಂತ್ವನ.. ಜೀವನದಲ್ಲಿ ಇನ್ನೇನಿದೆ ಎಂದು ಕೈಚೆಲ್ಲಿ ಕುಳಿತವನಿಗೆ ನೆನಪು ಒಂದು ಕ್ಷಣದಲ್ಲೇ ಖುಷಿಯನ್ನು ಉಕ್ಕಿಸುತ್ತದೆ.. ನೆನಪಿನ ದೋಣಿಯಲ್ಲಿ ತೆಲಾಡುತ್ತಿರುವಾಗ ಬೇರೆಲ್ಲ ಗೌಣವೆನಿಸುತ್ತೆ.. ಕ್ಷುಲ್ಲಕ ಎನಿಸುತ್ತೆ.. ನಾನೇನು ಅನ್ನೋದನ್ನೇ ಮರೆಯಿಸುತ್ತೆ..

ಬಡವ - ಬಲ್ಲಿದ ಇಬ್ಬರಿಗೂ ನೆನಪೇ ಆಸ್ತಿ.. ಕಹಿಯ ನೆನಪಿರಲಿ. ಸಿಹಿಯ ನೆನಪಿರಲಿ ಬದುಕಲ್ಲಿ ಅದು ಬೇಕು.. ಹಿಂದಿನ ನೆನಪಿನ ಗೋರಿಯಲಿ ಇಂದಿನ ಬದುಕ ಸಾಗಿಸಲು.. ಬಾಲ್ಯದಲ್ಲಿ ಆಟದ ನೆನಪು.. ಎಡೆಬಿಡದೆ ಸುರಿಯುತ್ತಿದ್ದ ಆ ಭಯಂಕರ ಮಳೆಯಲ್ಲೂ ಕಾಗದದ ದೋಣಿ ಮಾಡಿ ನೀರಲ್ಲಿ ಹರಿಯಬಿಟ್ಟದ್ದು..ಸ್ನೇಹಿತರ ಜೊತೆ ಅಲೆದಾಡಿ ಮನೆಯಲ್ಲಿ ಎಲ್ಲರ ಕೈಯಲ್ಲೂ ಉಗಿಸಿಕೊಂಡಿದ್ದು.. ಫೆವರಟೆ ಟೀಚರ್ ಗೆ ರೋಜ್ ಕೊಟ್ಟು ಖುಶಿಪತ್ತಿದ್ದು.. ಅಕ್ಕ, ತಮ್ಮಂದಿರ ಜೊತೆ ಜಗಳವಾಡಿದ್ದು.. ಮರಕೋತಿ ಆಟ ಆಡಲು ಹೋಗಿ ಮರದಿಂದ ಬಿದ್ದು ಕಾಲು ಮುರಿದುಕೊಂಡಿದ್ದು,, ಅಪ್ಪನ ಬೆಟ್ಟದ ಏಟಿನ ರುಚಿ ಕಂಡಿದ್ದು.. ಅಮ್ಮನ ಸೆರಗ ಹಿಂದೆ ಅವಿತುಕೊಂಡಿದ್ದು.. ಅಮ್ಮನ ಮಡಿಲಲ್ಲಿ ತಣ್ಣಗೆ ಮಲಗಲು ತಮ್ಮನ ಜೊತೆ ಸ್ಪರ್ದೆ ಹೂಡಿದ್ದು. ಅಜ್ಜನ ಹೆಗಲೇರಿ ಕುಳಿತು ಜಾತ್ರೆಯಲ್ಲೆಲ್ಲ ತಿರುಗಾಡಿದ್ದು.. ಅಜ್ಜಿಯಾ ಜೊತೆ ಹಠ ಮಾಡಿ ಕತೆ ಹೆಲಿಸಿಕೊಂಡಿದ್ದು... ಹೀಗೆ ಒಂದಾ ಎರಡಾ .. ನೆನಪಿನ ಬುತ್ತಿ ಬಿಚ್ಚಿಕೊಂಡನ್ತೆಲ್ಲ ಹೊಸ ಭಾವ ಸ್ಪುರಿಸುತ್ತದೆ..
ಮನೆಯಿಂದ ದೂರ ಇದ್ದಾಗ.. ಆತ್ಮಿಯರ ಸಾಮಿಪ್ಯ ಕಳೆದುಕೊಂಡಾಗ ಈ ನೆನಪುಗಳೇ ಆಪ್ತಮಿತ್ರ.. . ಕಾಲಕ್ಕೆ ತಕ್ಕಂತೆ ನೆನಪುಗಳು ತಮ್ಮ ಗತಿಯನ್ನು ಬದಲಾಯಿಸುತ್ತವೆ,,
ಬಾಲ್ಯದಿಂದ ನಿನ್ನೆಯವರೆಗೆ ನೆನಪಿನದೆ ಸಾಮ್ರಾಜ್ಯ.. ಗೆಳತಿ ದುರವಾದಾಗ ಕೊಟ್ಟ ಕೀಬಂಚ್ .. ಪುಸ್ತಕದಲ್ಲಿ ಮರಿಯಿಟ್ಟ ನವಿಲುಗರಿ.. ಹಳೆಯ ಸಣ್ಣ ಪೆಟ್ಟಿಗೆಯ ತುಂಬಾ ಪೇರಿಸಿಟ್ಟ ಕಪ್ಪೆ ಚಿಪ್ಪು.. ಹಳ್ಳದ ದಂಡೆಯಮೇಲೆ ಸಂಗ್ರಹಿಸಿದ್ದ ನುಣುಪಾದ ಕಲ್ಲುಗಳು.. ಚಿತ್ರವಿಚಿತ್ರ ಮಣಿ ಮುತ್ತುಗಳ ಸಂಗ್ರಹ.. ಇವೆಲ್ಲ ನೆನಪಾಗಿ ಕಾಡುತ್ತವೆ.. ಅಸ್ಟೇ ಯಾಕೆ ಹಳೆಯ ಪುಸ್ತಕ ತಿರುವಿದಾಗ  ಕೊನೆಯ ಬೆಂಚಿನಲ್ಲಿ ಕೊನೆಯ ಪುಟದಲ್ಲಿ ಗೆಳತಿಯ ಜೊತೆ ಆಟವಾಡಿದ್ದ ಚುಕ್ಕಿಯ ಆಟ... ಮತ್ತೇನನ್ನೋ ಗೀಚಿದ್ದ ಬರಹಗಳು..ಇವುಗಳನ್ನೆಲ್ಲ ಒಮ್ಮೆ ಬಿಡಿಸಿ ಓದಬೇಕು.. ಅನ್ನೋ ಭಾವನೆಯನ್ನು ಮೂಡಿಸುತ್ತದೆ..
ನೆನಪುಗಳನ್ನು ಚಿರಂಜೀವಿಯಾಗಿಸೋ ವಿಧಾನವೆಂದರೆ ಡೈರಿ .. ಡೈರಿಯ ಒಂದೊಂದು ಪುಟಗಳೂ ಕಳೆದ ಕ್ಷಣವನ್ನು ಪುನಹ ಕಣ್ಣೆದುರಿಗೆ ತಂದಿಡುತ್ತದೆ.. ಬದುಕು ನಿಸ್ಸಾರವಾದಾಗ ಹೊಸತನ ತುಂಬುತ್ತದೆ... ಗೆಳತಿಯನ್ನು ಬಸ್ಸಲ್ಲಿ ಕೂರಿಸಿ ಕೈ ಬೀಸಿದಾಗ ಇಬ್ಬರ ಕಣ್ಣಲ್ಲೂ ಉದಿರಿದ ಹನಿಗಳು ಇಂದಿಗೂ ಕಣ್ಣ ರೆಪ್ಪೆಯನ್ನು ತಂಪಾಗಿಸುತ್ತದೆ..
ಭೂತ, ಭವಿತವ್ಯದ ಮದ್ಯೆ ಪೋನಿಸಿಕೊಂದಿರೋ ನೆನಪುಗಳು ಚಿರಜವ್ವನ ಮೂಡಿಸುತ್ತದೆ.. ಹಾಗಂತ ನೆನಪುಗು ಮಾರಾಟಕ್ಕಿಲ್ಲ..ಅದನ್ನು ಯಾರು ದುಡ್ಡು ಕೊಟ್ಟು ಕೊಂಡುಕೊಳ್ಳಲು ಸಾದ್ಯ ಇಲ್ಲ.. ಕೇವಲ ನಮ್ಮ ಬದುಕಲ್ಲಿ ನಡೆದ ಘಟನೆಗಳೇ ಅದಕ್ಕೆ ಸ್ಪೂರ್ತಿ..
ಇಂದು ಸೋಲನ್ನು ಉನ್ನುತ್ತಿರುವಾಗ ಹಿಂದೊಮ್ಮೆ ಗೆಲುವು ನಿನ್ನದಾಗಿತ್ತು ಎಂದು ಬೆನ್ನು ತಟ್ಟಿ ಉತ್ಸಾಹ ತರಿಸುತ್ತದೆ.. ನೆನಪುಗಳೇ ಹಾಗೆ ಕ್ಷಣ ಕ್ಷಣವೂ ಖುಷಿ ನೀಡಿ ಮನಕೆ ಮುದನೀಡಿ ಕಷ್ಟ ಸಹಿಸೋ ಸಂಜೀವಿನಿ.. ಬೇಡವಾದದನ್ನ ಅಳಿಸಿ ಒಳಿತನ್ನೇ ಉಳಿಸುವ ಭಾವದೀಪಿಕೆ.. ವಿಷಾದದ ಸ್ಥಾಯಿಭಾವದ ನಡುವೆ ನೂರಾರುಕನಸು
ಗ ಳನ್ನು ತುಂಬುವಂತಹ ರಾಗ ರಂಜಿನಿ.. ಹೀಗಾಗಿ ನೆನಪುಗಳು ಬೇಕು.. ಬಾಲಪಯಣದಲ್ಲಿ ಜೊತೆಗೂಡಿ ಹಿಂದಿನ ನೆನಪಿನ ಗೋರಿಯಲಿ ಸುಂದರ ಚಾವಣಿ ನಿರ್ಮಿಸಲು..

Friday, January 15, 2010

ಕನಸು


ಅರಳುತ್ತವೆ ಕನಸುಗಳು ಹೂವಾಗಿ ರಂಗಾಗಿ

ಜಿಗಿಯುತ್ತವೆ ಮರಳಿ ಹುಟ್ಟುವ ಆಸೆ ಮೂಡಿಸಿ
ಎದೆಯ ಕೋಣೆಯ ಕದವ ತೆರೆದು
ಒಳಗೆ ಬರಲು ಸೊಗಸಾಗಿ ಹವಣಿಸಿ
ಭಾವ ದೀಪಿಕೆಯ ಪರದೆಯ ಸರಿಸಿ
ನುಗ್ಗುತ್ತವೆ ಬೆಂಬಿಡದ ಭೂತದಂತೆ

ಸಾಗುತ್ತದೆ ಕನಸುಗಳ ಹುಡುಕಾಟ ಆ ನದಿ ಬೆಟ್ಟ
ಕೊನೆಯಾಗದ ರಸ್ತೆಗಳ ಪ್ರತಿ ಅಂಚಿನಲಿ
ಸೂರ್ಯ, ಬಾನು, ಚಂದಿರ, ಚುಕ್ಕಿಗಳ ಚಿತ್ತಾರದಲಿ
ಕಡಲ ತೀರದಲಿ ಮರಲಾತದಲಿ ಅದರದೇ ಕನವರಿಕೆ
ಸೊಗಸಾದ ಮನೆ ಕಟ್ಟುವ ಭಾವದಲೂ
ಆದರೆ ಕೊನೆಗದು ಧ್ವಂಸ ಕಡಲ ಅಲೆಗಳಿಂದ ಏನು ಉಳಿಯದಂತೆ

ನಳುಗುತ್ತವೆ ಕನಸುಗಳು ದೇವರ ಮನೆ ದೀಪದೆದುರು
ಕೊನೆಗೊಮ್ಮೆ ಭಸ್ಮವಾಗಿ ನೆಲದಲ್ಲಿ ಮಾಯ
ಅದಕ್ಕೇನು ಸಾವಿಲ್ಲ ಇಂದಲ್ಲ ನಾಳೆ ಪುನರ್ಭವಿಸಿ
ಪದೇ ಪದೇ ಉಲ್ಲಾಸದ ಕಾರಂಜಿ ಹರಿಸಿ
ಆಶಾವಾದದ ಚೇತನದ ಪಡಿಯ ಮೂಡಿಸಿ
ಬದುಕುವ ಛಲವನ್ನು ಇನ್ನಿಲ್ಲದಂತೆ ತುಂಬುವಂತೆ



ಭಾವನೆಗಳ ಬೆನ್ನೇರಿ

ಮನಸ್ಸು ಹಲವಾರು ಭಾವನೆಗಳ ಸಂತೆ.. ಲಾಗ ಲಗಾಮಿಲ್ಲದ ಭಾವನೆಗಳಿಗೆ ಬೇಲಿಯೇ ಇಲ್ಲವೇನೋ... ನನ್ನ ಮನ ಕೂಡ ಇದಕ್ಕೆ
ಹೊರತಾಗಿಲ್ಲ.. ಇಲ್ಲಿ ಅದೆಸ್ಟೋ ಬಾರಿ ಕಡಲ ಅಲೆಗಳು ಉಕ್ಕೆರಿದಂತೆ ಭಾವಗಳು ಮೂಡುತ್ತೆ... ಸುನಾಮಿ ಅಲೆಗಳನ್ನು ಎಬ್ಬಿಸಿ ಮರೆಯಾಗಿ ಬಿಡುತ್ತೆ.... ಕೊನೆಗೆ ಏನು ನಡೆದಿಲ್ಲವೇನೋ ಅನ್ನುವಂತೆ ಶಾಂತ ರೂಪ ತಾಳುತ್ತೆ..
ಕಲ್ಪನೆ, ಕನಸು, ಹುಡುಕಾಟ, ಅಲೆದಾಟ ಇವೆಲ್ಲ ಭಾವನೆಗಳ ಮೇಳ .. ಕಲ್ಪನೆಯಲ್ಲಿ ಮೂಡಿರೋದೆಲ್ಲ ನಿಜರೂಪ ತಾಳಬೇಕೆನ್ನೋ ರೂಲ್ಸ್ ಏನು ಇಲ್ವಲ್ಲ .. ನಾನು ಅಸ್ಟೆ ಕನಸು ಕಾಣ್ತೀನಿ .. ಕನಸು ಕಂಡ ಸುಖ ನನ್ನ ಮನದಲ್ಲಿರುತ್ತೆ.. ಹುದುಕಾಟ ಬದುಕಿನ ಉಳಿದ ಅಸ್ಟು ಆಯಸ್ಸನ್ನು ಬೋರ್ ಆಗದಂತೆ ಕೊಂಡೊಯ್ಯೋ ಆಯಾಮ... ನಾನು ಬದುಕಿನ ಹುಡುಕಾಟದಲಿ ಅದೆಸ್ತೋ ಬಾರಿ ಮುಗ್ಗರಿಸಿದ್ದೇನೆ.. ಎಡವಿ ಬಿದ್ದಿದೇನೆ.. ಹಾಗೆ ಏನು ಆಗದಂತೆ ಕೊಡವಿಕೊಂಡು ಮೇಲಕ್ಕೆ ಎದ್ದಿದೀನಿ.. ಇದು ನಿರಂತರ ಪ್ರಕ್ರಿಯೆ ಕೂಡ ಹೌದು... ಹೀಗೆ ಭಾವನೆಗಳ ಬೆನ್ನೇರಿ ನನ್ನ ಬದುಕು ಸಾಗ್ತಾ ಇದೆ.. ಸಾಗ್ತಾ ಸಾಗ್ತಾ ನೆನಪಿನ ಪಳೆಯುಳಿಕೆಯನ್ನು ಜೊತೆ ಜೊತೆಯಲಿ ಕೊಂಡೊಯ್ಯುತಿದ್ದಿನಿ.. ನನಗೆ ತುಂಬ ಖುಷಿ ಕೊಡೋದು ಕಾಯುವಿಕೆ.. ಇದು ಕೆಲವೊಮ್ಮೆ ಖುಷಿ ನೀಡಿದರೆ ಮತ್ತೆ ಕೆಲವೊಮ್ಮೆ ಇಲ್ಲದ ನೋವಿಗೆ ಎಡೆ ಮಾಡಿಕೊಡುತ್ತೆ.. ಆದರೂ ಕಾಯುವಿಕೆ ಎಲ್ಲೋ ಒಂದು ಕಡೆ ಆಶಾವಾದದ ಚೇತನವನ್ನು ತುಂಬುತ್ತೆ...
ಕಾಯುವಿಕೆಯಲಿ ಖುಷಿಯಿದೆ
ಇಂದು ಬಾರದವ ನಾಳೆ ಬಂದಾನು
ಇಂದು ಕನಸಲಿ ನಿಲ್ಲದವ ನಾಳೆ ನಿಂತಾನು
ಇಂದು ಮುಳುಗಿದ ಸೂರ್ಯ ನಾಳೆ ಉದಯಿಸಿದಾಗ
ಇಂದಿನ ಕನಸೆಲ್ಲ ನನಸಾಗಬಹುದೆಂಬ ಆಶಾವಾದದಲಿ ಹಿತವಿದೆ...