
ಅರಳುತ್ತವೆ ಕನಸುಗಳು ಹೂವಾಗಿ ರಂಗಾಗಿ
ಜಿಗಿಯುತ್ತವೆ ಮರಳಿ ಹುಟ್ಟುವ ಆಸೆ ಮೂಡಿಸಿ
ಎದೆಯ ಕೋಣೆಯ ಕದವ ತೆರೆದು
ಒಳಗೆ ಬರಲು ಸೊಗಸಾಗಿ ಹವಣಿಸಿ
ಭಾವ ದೀಪಿಕೆಯ ಪರದೆಯ ಸರಿಸಿ
ನುಗ್ಗುತ್ತವೆ ಬೆಂಬಿಡದ ಭೂತದಂತೆ
ಸಾಗುತ್ತದೆ ಕನಸುಗಳ ಹುಡುಕಾಟ ಆ ನದಿ ಬೆಟ್ಟ
ಕೊನೆಯಾಗದ ರಸ್ತೆಗಳ ಪ್ರತಿ ಅಂಚಿನಲಿ
ಸೂರ್ಯ, ಬಾನು, ಚಂದಿರ, ಚುಕ್ಕಿಗಳ ಚಿತ್ತಾರದಲಿ
ಕಡಲ ತೀರದಲಿ ಮರಲಾತದಲಿ ಅದರದೇ ಕನವರಿಕೆ
ಸೊಗಸಾದ ಮನೆ ಕಟ್ಟುವ ಭಾವದಲೂ
ಆದರೆ ಕೊನೆಗದು ಧ್ವಂಸ ಕಡಲ ಅಲೆಗಳಿಂದ ಏನು ಉಳಿಯದಂತೆ
ನಳುಗುತ್ತವೆ ಕನಸುಗಳು ದೇವರ ಮನೆ ದೀಪದೆದುರು
ಕೊನೆಗೊಮ್ಮೆ ಭಸ್ಮವಾಗಿ ನೆಲದಲ್ಲಿ ಮಾಯ
ಅದಕ್ಕೇನು ಸಾವಿಲ್ಲ ಇಂದಲ್ಲ ನಾಳೆ ಪುನರ್ಭವಿಸಿ
ಪದೇ ಪದೇ ಉಲ್ಲಾಸದ ಕಾರಂಜಿ ಹರಿಸಿ
ಆಶಾವಾದದ ಚೇತನದ ಪಡಿಯ ಮೂಡಿಸಿ
ಬದುಕುವ ಛಲವನ್ನು ಇನ್ನಿಲ್ಲದಂತೆ ತುಂಬುವಂತೆ
No comments:
Post a Comment