ಬದುಕಿಗೊಂದು ಗೊತ್ತು ಗುರಿಯಿರದೆ ಸಾದನೆಯ ತುತ್ತತುದಿಗೆರಿದಾಗ ಹಿಂದೊಮ್ಮೆ ತಿರುಗಿ ನೋಡಿ ಅಲ್ಲಿದೆ ನೆನಪಿನ ಸಾಮ್ರಾಜ್ಯ.. ನೆನಪಿನ ಸಾಮ್ರಾಜ್ಯದಲ್ಲಿ ಎಲ್ಲ ಅಸ್ಪಸ್ಟ.. ಕಂಡರೂ ಕಾಣದಂತೆ ಉಳಿದಿರೋ ಕಡಲ ತೀರ...
ಇಂದಿನ ನೋವ ಮರೆಯೋ ಸಂಜೀವಿನಿಯೇ ಹಿಂದಿನ ನೆನಪು.. ಆ ದಿನ ಕಳೆದ ಸುಂದರ ಕ್ಷಣಗಳು.. ಸ್ನೇಹಿತರ ಜತೆಗಿನ ಒಡನಾಟ.. ಸಾಮಿಪ್ಯ.. ಬದುಕಿನ ಜಂಜಾಟದಲ್ಲಿ ನಮ್ಮನ್ನೇ ನಾವು ಮರೆತಿರುವಾಗ ಎಚ್ಚರಿಸುತ್ತದೆ.. ಉಲ್ಲಾಸದ ಕಾರಂಜಿಯನ್ನು ಹರಿಸುತ್ತದೆ..
ನೆನಪು ಎಂತವನಿಗು ಆಹ್ಲಾದದಾಯಕ.. ದುಗುಡ ತುಂಬಿದ ಮನಕ್ಕೆ ಸಾಂತ್ವನ.. ಜೀವನದಲ್ಲಿ ಇನ್ನೇನಿದೆ ಎಂದು ಕೈಚೆಲ್ಲಿ ಕುಳಿತವನಿಗೆ ನೆನಪು ಒಂದು ಕ್ಷಣದಲ್ಲೇ ಖುಷಿಯನ್ನು ಉಕ್ಕಿಸುತ್ತದೆ.. ನೆನಪಿನ ದೋಣಿಯಲ್ಲಿ ತೆಲಾಡುತ್ತಿರುವಾಗ ಬೇರೆಲ್ಲ ಗೌಣವೆನಿಸುತ್ತೆ.. ಕ್ಷುಲ್ಲಕ ಎನಿಸುತ್ತೆ.. ನಾನೇನು ಅನ್ನೋದನ್ನೇ ಮರೆಯಿಸುತ್ತೆ..
ಬಡವ - ಬಲ್ಲಿದ ಇಬ್ಬರಿಗೂ ನೆನಪೇ ಆಸ್ತಿ.. ಕಹಿಯ ನೆನಪಿರಲಿ. ಸಿಹಿಯ ನೆನಪಿರಲಿ ಬದುಕಲ್ಲಿ ಅದು ಬೇಕು.. ಹಿಂದಿನ ನೆನಪಿನ ಗೋರಿಯಲಿ ಇಂದಿನ ಬದುಕ ಸಾಗಿಸಲು.. ಬಾಲ್ಯದಲ್ಲಿ ಆಟದ ನೆನಪು.. ಎಡೆಬಿಡದೆ ಸುರಿಯುತ್ತಿದ್ದ ಆ ಭಯಂಕರ ಮಳೆಯಲ್ಲೂ ಕಾಗದದ ದೋಣಿ ಮಾಡಿ ನೀರಲ್ಲಿ ಹರಿಯಬಿಟ್ಟದ್ದು..ಸ್ನೇಹಿತರ ಜೊತೆ ಅಲೆದಾಡಿ ಮನೆಯಲ್ಲಿ ಎಲ್ಲರ ಕೈಯಲ್ಲೂ ಉಗಿಸಿಕೊಂಡಿದ್ದು.. ಫೆವರಟೆ ಟೀಚರ್ ಗೆ ರೋಜ್ ಕೊಟ್ಟು ಖುಶಿಪತ್ತಿದ್ದು.. ಅಕ್ಕ, ತಮ್ಮಂದಿರ ಜೊತೆ ಜಗಳವಾಡಿದ್ದು.. ಮರಕೋತಿ ಆಟ ಆಡಲು ಹೋಗಿ ಮರದಿಂದ ಬಿದ್ದು ಕಾಲು ಮುರಿದುಕೊಂಡಿದ್ದು,, ಅಪ್ಪನ ಬೆಟ್ಟದ ಏಟಿನ ರುಚಿ ಕಂಡಿದ್ದು.. ಅಮ್ಮನ ಸೆರಗ ಹಿಂದೆ ಅವಿತುಕೊಂಡಿದ್ದು.. ಅಮ್ಮನ ಮಡಿಲಲ್ಲಿ ತಣ್ಣಗೆ ಮಲಗಲು ತಮ್ಮನ ಜೊತೆ ಸ್ಪರ್ದೆ ಹೂಡಿದ್ದು. ಅಜ್ಜನ ಹೆಗಲೇರಿ ಕುಳಿತು ಜಾತ್ರೆಯಲ್ಲೆಲ್ಲ ತಿರುಗಾಡಿದ್ದು.. ಅಜ್ಜಿಯಾ ಜೊತೆ ಹಠ ಮಾಡಿ ಕತೆ ಹೆಲಿಸಿಕೊಂಡಿದ್ದು... ಹೀಗೆ ಒಂದಾ ಎರಡಾ .. ನೆನಪಿನ ಬುತ್ತಿ ಬಿಚ್ಚಿಕೊಂಡನ್ತೆಲ್ಲ ಹೊಸ ಭಾವ ಸ್ಪುರಿಸುತ್ತದೆ..
ಮನೆಯಿಂದ ದೂರ ಇದ್ದಾಗ.. ಆತ್ಮಿಯರ ಸಾಮಿಪ್ಯ ಕಳೆದುಕೊಂಡಾಗ ಈ ನೆನಪುಗಳೇ ಆಪ್ತಮಿತ್ರ.. . ಕಾಲಕ್ಕೆ ತಕ್ಕಂತೆ ನೆನಪುಗಳು ತಮ್ಮ ಗತಿಯನ್ನು ಬದಲಾಯಿಸುತ್ತವೆ,,
ಬಾಲ್ಯದಿಂದ ನಿನ್ನೆಯವರೆಗೆ ನೆನಪಿನದೆ ಸಾಮ್ರಾಜ್ಯ.. ಗೆಳತಿ ದುರವಾದಾಗ ಕೊಟ್ಟ ಕೀಬಂಚ್ .. ಪುಸ್ತಕದಲ್ಲಿ ಮರಿಯಿಟ್ಟ ನವಿಲುಗರಿ.. ಹಳೆಯ ಸಣ್ಣ ಪೆಟ್ಟಿಗೆಯ ತುಂಬಾ ಪೇರಿಸಿಟ್ಟ ಕಪ್ಪೆ ಚಿಪ್ಪು.. ಹಳ್ಳದ ದಂಡೆಯಮೇಲೆ ಸಂಗ್ರಹಿಸಿದ್ದ ನುಣುಪಾದ ಕಲ್ಲುಗಳು.. ಚಿತ್ರವಿಚಿತ್ರ ಮಣಿ ಮುತ್ತುಗಳ ಸಂಗ್ರಹ.. ಇವೆಲ್ಲ ನೆನಪಾಗಿ ಕಾಡುತ್ತವೆ.. ಅಸ್ಟೇ ಯಾಕೆ ಹಳೆಯ ಪುಸ್ತಕ ತಿರುವಿದಾಗ ಕೊನೆಯ ಬೆಂಚಿನಲ್ಲಿ ಕೊನೆಯ ಪುಟದಲ್ಲಿ ಗೆಳತಿಯ ಜೊತೆ ಆಟವಾಡಿದ್ದ ಚುಕ್ಕಿಯ ಆಟ... ಮತ್ತೇನನ್ನೋ ಗೀಚಿದ್ದ ಬರಹಗಳು..ಇವುಗಳನ್ನೆಲ್ಲ ಒಮ್ಮೆ ಬಿಡಿಸಿ ಓದಬೇಕು.. ಅನ್ನೋ ಭಾವನೆಯನ್ನು ಮೂಡಿಸುತ್ತದೆ..
ನೆನಪುಗಳನ್ನು ಚಿರಂಜೀವಿಯಾಗಿಸೋ ವಿಧಾನವೆಂದರೆ ಡೈರಿ .. ಡೈರಿಯ ಒಂದೊಂದು ಪುಟಗಳೂ ಕಳೆದ ಕ್ಷಣವನ್ನು ಪುನಹ ಕಣ್ಣೆದುರಿಗೆ ತಂದಿಡುತ್ತದೆ.. ಬದುಕು ನಿಸ್ಸಾರವಾದಾಗ ಹೊಸತನ ತುಂಬುತ್ತದೆ... ಗೆಳತಿಯನ್ನು ಬಸ್ಸಲ್ಲಿ ಕೂರಿಸಿ ಕೈ ಬೀಸಿದಾಗ ಇಬ್ಬರ ಕಣ್ಣಲ್ಲೂ ಉದಿರಿದ ಹನಿಗಳು ಇಂದಿಗೂ ಕಣ್ಣ ರೆಪ್ಪೆಯನ್ನು ತಂಪಾಗಿಸುತ್ತದೆ..
ಭೂತ, ಭವಿತವ್ಯದ ಮದ್ಯೆ ಪೋನಿಸಿಕೊಂದಿರೋ ನೆನಪುಗಳು ಚಿರಜವ್ವನ ಮೂಡಿಸುತ್ತದೆ.. ಹಾಗಂತ ನೆನಪುಗು ಮಾರಾಟಕ್ಕಿಲ್ಲ..ಅದನ್ನು ಯಾರು ದುಡ್ಡು ಕೊಟ್ಟು ಕೊಂಡುಕೊಳ್ಳಲು ಸಾದ್ಯ ಇಲ್ಲ.. ಕೇವಲ ನಮ್ಮ ಬದುಕಲ್ಲಿ ನಡೆದ ಘಟನೆಗಳೇ ಅದಕ್ಕೆ ಸ್ಪೂರ್ತಿ..
ಇಂದು ಸೋಲನ್ನು ಉನ್ನುತ್ತಿರುವಾಗ ಹಿಂದೊಮ್ಮೆ ಗೆಲುವು ನಿನ್ನದಾಗಿತ್ತು ಎಂದು ಬೆನ್ನು ತಟ್ಟಿ ಉತ್ಸಾಹ ತರಿಸುತ್ತದೆ.. ನೆನಪುಗಳೇ ಹಾಗೆ ಕ್ಷಣ ಕ್ಷಣವೂ ಖುಷಿ ನೀಡಿ ಮನಕೆ ಮುದನೀಡಿ ಕಷ್ಟ ಸಹಿಸೋ ಸಂಜೀವಿನಿ.. ಬೇಡವಾದದನ್ನ ಅಳಿಸಿ ಒಳಿತನ್ನೇ ಉಳಿಸುವ ಭಾವದೀಪಿಕೆ.. ವಿಷಾದದ ಸ್ಥಾಯಿಭಾವದ ನಡುವೆ ನೂರಾರುಕನಸು
ಗ ಳನ್ನು ತುಂಬುವಂತಹ ರಾಗ ರಂಜಿನಿ.. ಹೀಗಾಗಿ ನೆನಪುಗಳು ಬೇಕು.. ಬಾಲಪಯಣದಲ್ಲಿ ಜೊತೆಗೂಡಿ ಹಿಂದಿನ ನೆನಪಿನ ಗೋರಿಯಲಿ ಸುಂದರ ಚಾವಣಿ ನಿರ್ಮಿಸಲು..
ಇಂದಿನ ನೋವ ಮರೆಯೋ ಸಂಜೀವಿನಿಯೇ ಹಿಂದಿನ ನೆನಪು.. ಆ ದಿನ ಕಳೆದ ಸುಂದರ ಕ್ಷಣಗಳು.. ಸ್ನೇಹಿತರ ಜತೆಗಿನ ಒಡನಾಟ.. ಸಾಮಿಪ್ಯ.. ಬದುಕಿನ ಜಂಜಾಟದಲ್ಲಿ ನಮ್ಮನ್ನೇ ನಾವು ಮರೆತಿರುವಾಗ ಎಚ್ಚರಿಸುತ್ತದೆ.. ಉಲ್ಲಾಸದ ಕಾರಂಜಿಯನ್ನು ಹರಿಸುತ್ತದೆ..
ನೆನಪು ಎಂತವನಿಗು ಆಹ್ಲಾದದಾಯಕ.. ದುಗುಡ ತುಂಬಿದ ಮನಕ್ಕೆ ಸಾಂತ್ವನ.. ಜೀವನದಲ್ಲಿ ಇನ್ನೇನಿದೆ ಎಂದು ಕೈಚೆಲ್ಲಿ ಕುಳಿತವನಿಗೆ ನೆನಪು ಒಂದು ಕ್ಷಣದಲ್ಲೇ ಖುಷಿಯನ್ನು ಉಕ್ಕಿಸುತ್ತದೆ.. ನೆನಪಿನ ದೋಣಿಯಲ್ಲಿ ತೆಲಾಡುತ್ತಿರುವಾಗ ಬೇರೆಲ್ಲ ಗೌಣವೆನಿಸುತ್ತೆ.. ಕ್ಷುಲ್ಲಕ ಎನಿಸುತ್ತೆ.. ನಾನೇನು ಅನ್ನೋದನ್ನೇ ಮರೆಯಿಸುತ್ತೆ..

ಮನೆಯಿಂದ ದೂರ ಇದ್ದಾಗ.. ಆತ್ಮಿಯರ ಸಾಮಿಪ್ಯ ಕಳೆದುಕೊಂಡಾಗ ಈ ನೆನಪುಗಳೇ ಆಪ್ತಮಿತ್ರ.. . ಕಾಲಕ್ಕೆ ತಕ್ಕಂತೆ ನೆನಪುಗಳು ತಮ್ಮ ಗತಿಯನ್ನು ಬದಲಾಯಿಸುತ್ತವೆ,,
ಬಾಲ್ಯದಿಂದ ನಿನ್ನೆಯವರೆಗೆ ನೆನಪಿನದೆ ಸಾಮ್ರಾಜ್ಯ.. ಗೆಳತಿ ದುರವಾದಾಗ ಕೊಟ್ಟ ಕೀಬಂಚ್ .. ಪುಸ್ತಕದಲ್ಲಿ ಮರಿಯಿಟ್ಟ ನವಿಲುಗರಿ.. ಹಳೆಯ ಸಣ್ಣ ಪೆಟ್ಟಿಗೆಯ ತುಂಬಾ ಪೇರಿಸಿಟ್ಟ ಕಪ್ಪೆ ಚಿಪ್ಪು.. ಹಳ್ಳದ ದಂಡೆಯಮೇಲೆ ಸಂಗ್ರಹಿಸಿದ್ದ ನುಣುಪಾದ ಕಲ್ಲುಗಳು.. ಚಿತ್ರವಿಚಿತ್ರ ಮಣಿ ಮುತ್ತುಗಳ ಸಂಗ್ರಹ.. ಇವೆಲ್ಲ ನೆನಪಾಗಿ ಕಾಡುತ್ತವೆ.. ಅಸ್ಟೇ ಯಾಕೆ ಹಳೆಯ ಪುಸ್ತಕ ತಿರುವಿದಾಗ ಕೊನೆಯ ಬೆಂಚಿನಲ್ಲಿ ಕೊನೆಯ ಪುಟದಲ್ಲಿ ಗೆಳತಿಯ ಜೊತೆ ಆಟವಾಡಿದ್ದ ಚುಕ್ಕಿಯ ಆಟ... ಮತ್ತೇನನ್ನೋ ಗೀಚಿದ್ದ ಬರಹಗಳು..ಇವುಗಳನ್ನೆಲ್ಲ ಒಮ್ಮೆ ಬಿಡಿಸಿ ಓದಬೇಕು.. ಅನ್ನೋ ಭಾವನೆಯನ್ನು ಮೂಡಿಸುತ್ತದೆ..
ನೆನಪುಗಳನ್ನು ಚಿರಂಜೀವಿಯಾಗಿಸೋ ವಿಧಾನವೆಂದರೆ ಡೈರಿ .. ಡೈರಿಯ ಒಂದೊಂದು ಪುಟಗಳೂ ಕಳೆದ ಕ್ಷಣವನ್ನು ಪುನಹ ಕಣ್ಣೆದುರಿಗೆ ತಂದಿಡುತ್ತದೆ.. ಬದುಕು ನಿಸ್ಸಾರವಾದಾಗ ಹೊಸತನ ತುಂಬುತ್ತದೆ... ಗೆಳತಿಯನ್ನು ಬಸ್ಸಲ್ಲಿ ಕೂರಿಸಿ ಕೈ ಬೀಸಿದಾಗ ಇಬ್ಬರ ಕಣ್ಣಲ್ಲೂ ಉದಿರಿದ ಹನಿಗಳು ಇಂದಿಗೂ ಕಣ್ಣ ರೆಪ್ಪೆಯನ್ನು ತಂಪಾಗಿಸುತ್ತದೆ..
ಭೂತ, ಭವಿತವ್ಯದ ಮದ್ಯೆ ಪೋನಿಸಿಕೊಂದಿರೋ ನೆನಪುಗಳು ಚಿರಜವ್ವನ ಮೂಡಿಸುತ್ತದೆ.. ಹಾಗಂತ ನೆನಪುಗು ಮಾರಾಟಕ್ಕಿಲ್ಲ..ಅದನ್ನು ಯಾರು ದುಡ್ಡು ಕೊಟ್ಟು ಕೊಂಡುಕೊಳ್ಳಲು ಸಾದ್ಯ ಇಲ್ಲ.. ಕೇವಲ ನಮ್ಮ ಬದುಕಲ್ಲಿ ನಡೆದ ಘಟನೆಗಳೇ ಅದಕ್ಕೆ ಸ್ಪೂರ್ತಿ..
ಇಂದು ಸೋಲನ್ನು ಉನ್ನುತ್ತಿರುವಾಗ ಹಿಂದೊಮ್ಮೆ ಗೆಲುವು ನಿನ್ನದಾಗಿತ್ತು ಎಂದು ಬೆನ್ನು ತಟ್ಟಿ ಉತ್ಸಾಹ ತರಿಸುತ್ತದೆ.. ನೆನಪುಗಳೇ ಹಾಗೆ ಕ್ಷಣ ಕ್ಷಣವೂ ಖುಷಿ ನೀಡಿ ಮನಕೆ ಮುದನೀಡಿ ಕಷ್ಟ ಸಹಿಸೋ ಸಂಜೀವಿನಿ.. ಬೇಡವಾದದನ್ನ ಅಳಿಸಿ ಒಳಿತನ್ನೇ ಉಳಿಸುವ ಭಾವದೀಪಿಕೆ.. ವಿಷಾದದ ಸ್ಥಾಯಿಭಾವದ ನಡುವೆ ನೂರಾರುಕನಸು
ಗ ಳನ್ನು ತುಂಬುವಂತಹ ರಾಗ ರಂಜಿನಿ.. ಹೀಗಾಗಿ ನೆನಪುಗಳು ಬೇಕು.. ಬಾಲಪಯಣದಲ್ಲಿ ಜೊತೆಗೂಡಿ ಹಿಂದಿನ ನೆನಪಿನ ಗೋರಿಯಲಿ ಸುಂದರ ಚಾವಣಿ ನಿರ್ಮಿಸಲು..
ನೆನಪುಗಳ ಮಾತು ಮಧುರ. ನೂರಕ್ಕೆ ನೂರರಷ್ಟು ನಿಜ ಭವ್ಯ. ಸ್ನೇಹಿತರನ್ನ ಬಸ್ಸಲ್ಲಿ ಕೂರಿಸಿ ಟಾಟಾ ಮಾಡೋದು ಜೀವನದ ಅತೀ ಸಂಕಟದ ಸಮಯದಲ್ಲೊಂದು. ಆ ನೋವಿಗೆ ಪದಗಳಿಲ್ಲ. ಅದೆಲ್ಲ ನೆನಪಿಸಿ ಮತ್ತೆ ಒಂದು ಕ್ಷಣ ಕಣ್ಣಲ್ಲಿ ಹನಿ ಜಿನುಗಿಸಿದೆ ನೀನು. ನಿನಗೆ, ನಿನ್ನ ಬರಹಕ್ಕೆ ನನ್ನ ಮನಸ್ಸು ಧನ್ಯವಾದ ಹೇಳಿದೆ. ಮತ್ತೆ ನಿನ್ನ ಬರಹದ ನಿರೀಕ್ಷೆಯಲ್ಲಿ ನಿನ್ನ ಸ್ನೇಹಿತ ಪ್ರಶಾಂತ್ .
ReplyDelete